Posts

Showing posts from September, 2021

ಗ್ವಾಲಿಯರ್-ಇಂದೋರ್ ನಡುವಿನ ಮೊದಲ ನೇರ ವಿಮಾನಯಾನಕ್ಕೆ ಚಾಲನೆ ನೀಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ

Image
 ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ಡಾ.ವಿ.ಕೆ.ಸಿಂಗ್ (ನಿವೃತ್ತ) ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರದೀಪ್ ಖರೋಲಾ ಅವರ ಸಮಕ್ಷಮದಲ್ಲಿ ಇಂದು ಮಧ್ಯಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ವೈಮಾನಿಕ ಸಂಪರ್ಕ ಬಲವರ್ಧನೆಗೊಳಿಸುವ ಉದ್ದೇಶದ ಎರಡು ವಿಮಾನಗಳ ಸಂಚಾರಕ್ಕೆ ವರ್ಚುವಲ್ ರೂಪದಲ್ಲಿ ಹಸಿರು ನಿಶಾನೆ ತೋರಲಾಯಿತು. ಈ ಕಾರ್ಯಕ್ರಮದಲ್ಲಿ ದೆಹಲಿ ಮಾರ್ಗವಾಗಿ ಗ್ವಾಲಿಯರ್-ಇಂದೋರ್ (ಮಧ್ಯಪ್ರದೇಶ) ನಡುವೆ ಇಂಡಿಗೋದ ನೇರ ಮೊದಲ ವಿಮಾನ ಸಂಚಾರ ಆರಂಭಕ್ಕೆ ಮತ್ತು ಇಂದೋರ್ (ಮಧ್ಯಪ್ರದೇಶ)- ದುಬೈ (ಯುಎಇ) ನಡುವೆ  ಏರ್ ಇಂಡಿಯಾದ ನೇರ ವಿಮಾನ ಸಂಚಾರ ಪುನರಾರಂಭಕ್ಕೆ ಚಾಲನೆ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಂದ ಆಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ “ನ್ಯೂಟ್ರಿ ಗಾರ್ಡನ್" ಉದ್ಗಾಟನೆ

Image
 ಪೋಷಣ್ ಮಾಸ 2021ರಡಿ ತಿಂಗಳಿಡೀ ನಡೆಯುವ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸೃತಿ ಜುಬಿನ್ ಇರಾನಿ ಅವರು “ದೇಶದ ಪೌಷ್ಟಿಕಾಂಶ ಅಗತ್ಯವನ್ನು ಪೂರೈಸಲು ಆಯುರ್ವೇದದ ಮೂಲಿಕೆಗಳ ಮೂಲಕ ಪುರಾತನ ಬುದ್ಧಿವಂತಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸುವುದಕ್ಕೆ ಇದು ಸಕಾಲ.”ಎಂದು ಹೇಳಿದರು.