Posts

Showing posts from April, 2021

ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಔಷಧಗಳು, ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಕುರಿತು ಪರಾಮರ್ಶೆ ನಡೆಸಿದ ಕೇಂದ್ರ ಆರೋಗ್ಯ ಸಚಿವರು

Image
ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಔಷಧಗಳು, ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಕುರಿತು ಪರಾಮರ್ಶೆ ನಡೆಸಿದ ಕೇಂದ್ರ ಆರೋಗ್ಯ ಸಚಿವರು ಕೋವಿಡ್-19 ವಿರುದ್ಧದ ಸಮರದಲ್ಲಿ ಭಾರತ ಸರ್ಕಾರದ ನಿರಂತರ ಬೆಂಬಲ ಮುಂದುವರಿಸುವುದಾಗಿ ಭರವಸೆ ಭಾರತ ಸರ್ಕಾರದ ಶ್ರೇಣೀಕೃತ, ಪೂರ್ವಭಾವಿ ಮತ್ತು ಕ್ರಿಯಾಶೀಲ ವಿಧಾನಕ್ಕೆ ಅನುಗುಣವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿಂದು ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರುಗಳೊಂದಿಗೆ ಸೋಂಕು ತಡೆ, ನಿಯಂತ್ರಣ ಮತ್ತು ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆ ಸುಮಾರು 3 ಗಂಟೆಗೂ ಅಧಿಕ ಕಾಲ ನಡೆಯಿತು. ಆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ ಮಹಾರಾಷ್ಟ್ರ, ಛತ್ತೀಸ್ ಗಢ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಕೇರಳ, ಪಶ್ಚಿಮಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದ್ದು, ಆ ರಾಜ್ಯಗಳಲ್ಲಿ ಹೊಸದಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ.

ʻಮಿಷನ್ ಕೋವಿಡ್ ಸುರಕ್ಷಾʼ ಯೋಜನೆ ಅಡಿಯಲ್ಲಿ ಕೋವಾಕ್ಸಿನ್ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ

Image
ದೇಶೀಯವಾಗಿ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯ ವೇಗವರ್ಧನೆಗಾಗಿ ʻಆತ್ಮನಿರ್ಭರ ಭಾರತ್ 3.0ʼ ಅಡಿಯಲ್ಲಿ ʻಮಿಷನ್ ಕೋವಿಡ್ ಸುರಕ್ಷಾʼ ಯೋಜನೆಯನ್ನು ಭಾರತ ಸರಕಾರ ಘೋಷಿಸಿದೆ. ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.  ಈ ಯೋಜನೆ ಅಡಿಯಲ್ಲಿ, ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಉತ್ಪಾದನೆ ಹೆಚ್ಚಳಕ್ಕಾಗಿ ಲಸಿಕೆ ತಯಾರಿಕಾ ಘಟಕಗಳಿಗೆ ಅನುದಾನದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಯ ಪ್ರಸ್ತುತ ಉತ್ಪಾದನಾ ಸಾಮರ್ಥ್ಯವನ್ನು 2021ರ ಮೇ-ಜೂನ್ ವೇಳೆಗೆ ದ್ವಿಗುಣಗೊಳಿಸಲಾಗುವುದು ಮತ್ತು ನಂತರ ಜುಲೈ - ಆಗಸ್ಟ್ 2021ರ ವೇಳೆಗೆ ಸುಮಾರು 6-7 ಪಟ್ಟು ಹೆಚ್ಚಿಸಲಾಗುವುದು. ಅಂದರೆ 2021ರ ಏಪ್ರಿಲ್‌ನಲ್ಲಿ 1 ಕೋಟಿಯಷ್ಟಿರುವ ಲಸಿಕೆ ಉತ್ಪಾದನಾ ಪ್ರಮಾಣವನ್ನು ಜುಲೈ- ಆಗಸ್ಟ್ ವೇಳೆಗೆ 6-7 ಕೋಟಿಗೆ ಹೆಚ್ಚಿಸಲಾಗುವುದು. ಈ ಉತ್ಪಾದನಾ ಪ್ರಮಾಣ ಸೆಪ್ಟೆಂಬರ್ 2021ರ ವೇಳೆಗೆ ಮಾಸಿಕ ಸುಮಾರು 10 ಕೋಟಿ ಡೋಸ್ ಗಳಿಗೆ ತಲುಪುವ ನಿರೀಕ್ಷೆಯಿದೆ.